ಜಾಲಿವುಡ್‌ ಸ್ಟುಡಿಯೋ ಮತ್ತೆ ತೆರೆಯಲು ಅನುಮತಿ ನೀಡಿದ ಬಳಿಕ ಬಿಗ್‌ ಬಾಸ್‌ ಶೂಟಿಂಗ್‌ ಮತ್ತೆ ಶುರುವಾಗಿದೆ. ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಎರಡನೇ ವಾರದ ಪಂಚಾಯಿತಿ ಇಂದು (ಅಕ್ಟೋಬರ್ 11) ನಡೆದಿದೆ. ಸುದೀಪ್ ಅವರು ಪ್ರತಿಬಾರಿಯಂತೆ ಈ ಬಾರಿಯೂ ಸಹ ಸ್ಪರ್ಧಿಗಳ ತಪ್ಪು-ಸರಿಗಳ ಪರಾಮರ್ಶೆ ಮಾಡಿದ್ರು. ಕಾಕ್ರೂಚ್ ಸುಧಿಗೆ ಕೊಟ್ಟಿದ್ದ ಅಸುರ ಟಾಸ್ಕ್ ಬಗ್ಗೆ ಸುದೀಪ್ ಚರ್ಚೆ ಮಾಡಿದ್ರು.

ಇದೇ ವೇಳೆ ವಿವಾದದ ಬಗ್ಗೆ ಕಿಚ್ಚ ಸುದೀಪ್‌ (Kichcha Sudeep) ಮೌನ ಮುರಿದು ಮಾತನಾಡಿದ್ರು. ಕನ್ನಡಿಗರ ಆಶೀರ್ವಾದ ಇರೋತನಕ ಬಿಗ್ ಬಾಸ್ ಸುಲಭವಾಗಿ ನಿಲ್ಲಲ್ಲ. ಇಲ್ಲಿ ಆಗಿದ್ದೇ ಬೇರೆ.. ಹೊರಗಡೆ ನಡಿತಾ ಇದ್ದಿದ್ದೆ ಬೇರೆ. ಇಲ್ಲಿ ನಡೆದಿರುವ ವಿಚಾರಕ್ಕೂ ಬಿಗ್‌ ಬಾಸ್‌ಗೂ, ಕಲರ್ಸ್‌ ಕನ್ನಡಕ್ಕೂ ಯಾವುದೇ ಸಂಬಂಧ ಇಲ್ಲ. ವಿವಾದ ಬಂದಿದ್ದು ನಾವು ಶೋ ನಡೆಸುತ್ತಿದ್ದ ಜಾಗದ್ದು. ಕೆಲವೊಮ್ಮೆ ಖಾಲಿ ಜಾಗಕ್ಕೆ ಒಂದು ಅಡ್ರೆಸ್‌ ಬೇಕಾಗುತ್ತೆ. ಆ ಅಡ್ರೆಸ್ಸೆ ಬಿಸ್‌ ಬಾಸ್‌ ಆಗಿ ಹೋಯ್ತು ಅಂತ ಕಿಚ್ಚ ಸ್ಪಷ್ಟನೆ ಕೊಟ್ರು.

ಇಲ್ಲಿ ನಡೆದ ಘಟನೆಗೂ ಬಿಗ್‌ ಬಾಸ್‌ಶೋಗೂ ಯಾವುದೇ ಸಂಬಂಧ ಇಲ್ಲ. ಬಿಗ್ ಬಾಸ್ ಎಷ್ಟೋ ಜನಕ್ಕೆ ಅನ್ನಹಾಕಿದೆ, ದಾರಿದೀಪ ಆಗಿದೆ. ಅತಿದೊಡ್ಡ ಶೋ ಕೆಲವರ ಕಣ್ಣು ಕುಕ್ಕುತ್ತಾ ಇರುತ್ತೆ. ಖಾಲಿ ಜಾಗಕ್ಕೆ ಬಿಗ್ ಬಾಸ್ ಅನ್ನೋ ಹೆಸರಿಟ್ಟರೂ ಅದಕ್ಕೊಂದು ತೂಕ ಇದೆ ಎಂದು ಹೇಳಿದ್ರು.

ಇಂತಹ ಸಂದರ್ಭದಲ್ಲಿ ಶೋ ಮತ್ತೆ ಶುರುವಾಗಲು ಕಾರಣರಾದ ಡಿಕೆ ಸಾಹೇಬ್ರಿಗೆ ಹಾಗೂ ನನ್ನ ಸ್ನೇಹಿತ ನಲಪಾಡ್‌ ಅವರಿಗೆ ಧನ್ಯವಾದ ಹೇಳಲೇಬೇಕು. ಹಾಗೆಯೇ ಸಪೋರ್ಟ್‌ ಮಾಡಿದ ಆಡಳಿತ ಮಂಡಳಿಯ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದ್ರು.

About The Author

By ಅರೆಯೂರು ಚಿ.ಸುರೇಶ್

ಕನ್ನಡ E News ನಲ್ಲಿ ಸಂಪಾದಕರು

Leave a Reply

Your email address will not be published. Required fields are marked *

error: ನಕಲು ಮಾಡಲು ಸಾಧ್ಯವಿಲ್ಲ!