ಕನ್ನಡದಲ್ಲಿಯೂ ಹಲವು ಸಿನಿಮಾಗಳಲ್ಲಿ ಮೀನಾ ನಟಿಸಿದ್ದಾರೆ.

ನಟಿ ಮೀನಾ 90ರ ದಶಕದಲ್ಲಿ ಸಿನಿರಸಿಕರ ಮನಗೆದ್ದ ಚೆಲುವೆಯಾಗಿದ್ದರು. ರಜಿನಿಕಾಂತ್​, ಕಮಲ್​ ಹಾಸನ್​ ಹಾಗೂ ಕನ್ನಡದಲ್ಲಿ ವಿಷ್ಣುವರ್ಧನ್, ರವಿಚಂದ್ರನ್‌ರಂತಹ ಪ್ರಮುಖ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡವರು. 

ಮಲಯಾಳಂ ಚಿತ್ರ ‘ದೃಶ್ಯಂ’ ಚಿತ್ರೀಕರಣ ಪ್ರಾರಂಭವಾಗುವ ಮೂರು ತಿಂಗಳ ಮೊದಲು ತಮ್ಮ ಮಗಳು ನೈನಿಕಾ ಜನಿಸಿದಳು ಎಂದು ನಟಿ ಮೀನಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು.

ಅದೇ ಸಮಯದಲ್ಲಿ ಮೋಹನ್ ಲಾಲ್ ಕರೆ ಮಾಡಿ ದೃಶ್ಯಂ ಚಿತ್ರದಲ್ಲಿ ನಟಿಸಲು ಒತ್ತಾಯಿಸಿದ್ದರು ಎಂದು ನಟಿ ಮೀನಾ ಹೇಳಿದ್ದಾರೆ.

ಅದು ನೀವು ಮಾತ್ರ ನಟಿಸಬೇಕಾದ ಚಿತ್ರ ಎಂದು ಮೋಹನ್ ಲಾಲ್ ಹೇಳಿದ್ದರಂತೆ. ನನಗೆ ಮಗುವಾಗಿ ಮೂರು ತಿಂಗಳು ಕಳೆದಿದ್ದರಿಂದ ನನಗೆ ಅದು ಸಾಧ್ಯವಾಗಲಿಲ್ಲ.

ಆದರೆ ಮೋಹನ್ ಲಾಲ್ ಚಿತ್ರದ ಸಂಪೂರ್ಣ ಕಥೆಯನ್ನು ಹೇಳಿದರು. ನನ್ನನ್ನು ಒತ್ತಾಯಿಸಿ ಮನವೊಲಿಸಿದರು. ದೃಶ್ಯಂ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸ್ಥಳದಲ್ಲಿ ಸೆಲ್ ಫೋನ್ ಸಿಗ್ನಲ್‌ಗಳು ಚೆನ್ನಾಗಿರಲಿಲ್ಲ. ಅದು ಒಂದು ಹಳ್ಳಿ ಎಂದು ನಟಿ ಮೀನಾ ಹೇಳಿದ್ದಾರೆ.

ತಲೆನೋವು ಅಥವಾ ಇನ್ನಾವುದೇ ಸಮಸ್ಯೆ ಇದ್ದರೆ ಮಾತ್ರೆ ಪಡೆಯಲು ಬಹಳ ದೂರ ಪ್ರಯಾಣಿಸಬೇಕಾಗುತ್ತದೆ. ಇದೇ ಕಾರಣಕ್ಕೆ ನಾನು ಆರಂಭದಲ್ಲಿ ದೃಶ್ಯಂ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದೆ ಎಂದು ನಟಿ ಮೀನಾ ಹೇಳಿದ್ದಾರೆ.

ಆದರೆ ಮೋಹನ್ ಲಾಲ್ ನನ್ನನ್ನು ವಿನಂತಿಸಿಕೊಂಡರು. ನನಗೆಗೆ ಮನವರಿಕೆ ಮಾಡಿಕೊಟ್ಟರು. ಆ ಸಿನಿಮಾ ಬಿಡುಗಡೆಯಾದ ನಂತರ ಎಷ್ಟು ದೊಡ್ಡ ಹಿಟ್ ಆಯ್ತು ಅಂತ ಎಲ್ಲರಿಗೂ ಗೊತ್ತು ಎಂದು ನಟಿ ಮೀನಾ ಹೇಳಿದ್ದಾರೆ. ಈ ಸಿನಿಮಾ ಮಾಡದೇ ಹೋಗಿದ್ದರೆ, ನಾನು ಬಹಳಷ್ಟು ಕಳೆದುಕೊಳ್ಳುತ್ತಿದ್ದೆ ಎಂದು ನಂತರ ನನಗೆ ಅರಿವಾಯಿತು ಎಂದು ನಟಿ ಮೀನಾ ಹೇಳಿದ್ದಾರೆ.

About The Author

By Admin

Leave a Reply

Your email address will not be published. Required fields are marked *

error: ನಕಲು ಮಾಡಲು ಸಾಧ್ಯವಿಲ್ಲ!