ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಮನೆಯಲ್ಲಿ ಈ ವಾರ ದೊಡ್ಡ ಆಘಾತ ಎದುರಾಗಿದೆ! ಮೊದಲ ಫಿನಾಲೆ ವಾರವೆಂದೇ ಬಿಂಬಿಸಲಾಗಿರುವ ಈ ವಾರದಲ್ಲಿ, ಕಿಚ್ಚ ಸುದೀಪ್ ಅವರ ವಾರದ ಪಂಚಾಯಿತಿ ಶುರುವಾದ ಮೊದಲ ದಿನವೇ (ಶನಿವಾರ) ಡಬಲ್ ಎಲಿಮಿನೇಷನ್ ಮೂಲಕ ಇಬ್ಬರು ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಈ ಮೂಲಕ ವಾರದಲ್ಲಿ ಇನ್ನೂ ಒಂದು ದಿನ ಬಾಕಿಯಿರುವಾಗಲೇ ಒಟ್ಟು ಮೂರು ಮಂದಿ ಬಿಗ್‌ಬಾಸ್ ಮನೆಯಿಂದ ಹೊರಹೋಗುವಂತಾಗಿದೆ.
ಕಿಚ್ಚ ಸುದೀಪ್ ಮೊದಲೇ ಸುಳಿವು ನೀಡಿದಂತೆ, ಈ ವಾರ ಸುಮಾರು ಆರು ಮಂದಿ ಹೊರ ಹೋಗಲಿದ್ದಾರೆ. ಅದರಂತೆ, ಮಿಡ್-ವೀಕ್ ಎಲಿಮಿನೇಷನ್‌ನಲ್ಲಿ ಡಾಗ್ ಸತೀಶ್ ಅವರು ಮನೆಯಿಂದ ಹೊರಹೋಗಿದ್ದರು. ಇದೀಗ ವಾರದ ಪಂಚಾಯಿತಿಯ ಶನಿವಾರದ ಸಂಚಿಕೆಯಲ್ಲಿ ಇಬ್ಬರು ಪ್ರಮುಖ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ.
ನಾಮಿನೇಟ್ ಆಗಿದ್ದ 11 ಮಂದಿ!
ಈ ವಾರ ಬರೋಬ್ಬರಿ 11 ಮಂದಿ ನಾಮಿನೇಟ್ ಆಗಿದ್ದರು. ಗಿಲ್ಲಿ, ಕಾವ್ಯಾ, ಮಲ್ಲಮ್ಮ, ಮಂಜು ಭಾಷಿಣಿ, ಅಶ್ವಿನಿ, ಸ್ಪಂದನಾ, ರಕ್ಷಿತಾ ಶೆಟ್ಟಿ, ಅಭಿಷೇಕ್, ಧ್ರುವಂತ್, ಧನುಶ್, ಚಂದ್ರಪ್ರಭಾ ಡೇಂಜರ್ ಜೋನ್‌ನಲ್ಲಿ ಇದ್ದರು.
ಮೊದಲಿಗೆ ಸುದೀಪ್ ಆಟವೊಂದನ್ನು ಆಡಿಸಿದರು. ನಾಮಿನೇಟ್ ಆದ ಸ್ಪರ್ಧಿಗಳ ಫೋಟೊ ಮೇಲೆ ಗಾಜಿನ ಹೊದಿಕೆ ಒಡೆದು ಸೇಫ್-ಡೇಂಜರ್ ನಿರ್ಧರಿಸಲಾಯಿತು. ಈ ಆಟದಲ್ಲಿ…
- ಸೇಫ್ ಆದವರು: ಚಂದ್ರಪ್ರಭಾ, ಗಿಲ್ಲಿ, ಕಾವ್ಯಾ, ರಕ್ಷಿತಾ ಶೆಟ್ಟಿ, ಮಲ್ಲಮ್ಮ.
- ಡೇಂಜರ್ ಜೋನ್‌ನಲ್ಲಿ ಉಳಿದವರು: ಅಶ್ವಿನಿ, ಸ್ಪಂದನಾ, ಮಂಜು ಭಾಷಿಣಿ, ಅಭಿಷೇಕ್, ಧ್ರುವಂತ್, ಧನುಶ್.
ನಂತರ, ಈ ಡೇಂಜರ್ ಜೋನ್‌ನಲ್ಲಿ ಉಳಿದ ಸ್ಪರ್ಧಿಗಳಿಗಾಗಿ ಮತ್ತೊಂದು ಆಟವನ್ನು ಆಡಿಸಲಾಯಿತು. ಆ ಆಟದಲ್ಲಿ ಧ್ರುವಂತ್ ಮತ್ತು ಸ್ಪಂದನಾ ಅವರು ಮತ್ತೊಮ್ಮೆ ಸೇಫ್ ಆದರು.
ಡಬಲ್ ಎಲಿಮಿನೇಷನ್ ಬಲಿಪಶುಗಳಾದ ಆ ಇಬ್ಬರು!
ಕೊನೆಗೆ ಉಳಿದ ಸ್ಪರ್ಧಿಗಳಲ್ಲಿ, ಹೊರ ಹೋಗುತ್ತಿರುವವರ ಹೆಸರನ್ನು ಸ್ವತಃ ಸುದೀಪ್ ಅವರೇ ಘೋಷಿಸಿದರು. ಭಾರಿ ಕುತೂಹಲಕ್ಕೆ ತೆರೆ ಬಿದ್ದಿದ್ದು, ಹೌದು! ಬಿಗ್‌ಬಾಸ್ ಮನೆಯಿಂದ ಈ ವಾರ ಡಬಲ್ ಎಲಿಮಿನೇಷನ್‌ಗೆ ಒಳಗಾದ ಆ ಇಬ್ಬರು ಸ್ಪರ್ಧಿಗಳು… - ಮಂಜು ಭಾಷಿಣಿ
- ಅಶ್ವಿನಿ
…ಹೌದು, ಮಂಜು ಭಾಷಿಣಿ ಮತ್ತು ಅಶ್ವಿನಿ ಅವರು ಈ ವಾರ ಬಿಗ್‌ಬಾಸ್ ಮನೆಯಿಂದ ಒಟ್ಟಿಗೆ ಹೊರಹೋಗಿದ್ದಾರೆ.
ಈ ಮೂಲಕ, ಡಾಗ್ ಸತೀಶ್ ಅವರ ಮಿಡ್-ವೀಕ್ ಎಲಿಮಿನೇಷನ್ ಸೇರಿ, ವಾರದಲ್ಲಿ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಒಟ್ಟು ಮೂರು ಮಂದಿ ಸ್ಪರ್ಧಿಗಳು ಬಿಗ್‌ಬಾಸ್ ಪ್ರಯಾಣವನ್ನು ಕೊನೆಗೊಳಿಸಿದಂತಾಗಿದೆ. ನಾಳಿನ (ಭಾನುವಾರ) ಎಪಿಸೋಡ್‌ನಲ್ಲಿ ಮತ್ತಷ್ಟು ಅನಿರೀಕ್ಷಿತ ತಿರುವುಗಳು ಮತ್ತು ಹೊಸ ಸ್ಪರ್ಧಿಗಳ ಆಗಮನದ ಸಾಧ್ಯತೆಗಳೂ ಇವೆ ಎಂದು ಮೂಲಗಳು ತಿಳಿಸಿವೆ. ಬಿಗ್‌ಬಾಸ್ ಮನೆಯಲ್ಲಿ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ!