ಸೀತಾಫಲ ಹಣ್ಣು ತಿನ್ನಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ
ಮಧುಮೇಹಿಗಳು ಸೀತಾಫಲವನ್ನ ಅಪ್ಪಿತಪ್ಪಿಯೂ ತಿನ್ನಬಾರದು
ಈ ಹಣ್ಣಿನಲ್ಲಿ ಫ್ರಕ್ಟೋಸ್ ಇರುವುದರಿಂದ ಮಧುಮೇಹಿಗಳಿಗೆ ಒಳ್ಳೆಯದಲ್ಲ

Custard Apple Benefits: ಸೀತಾಫಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಳಿಗಾಲ ಪ್ರಾರಂಭವಾದಾಗ ಎಲ್ಲರಿಗೂ ಸೀತಾಫಲ ನೆನಪಾಗುತ್ತದೆ. ಈ ಋತುವಿನಲ್ಲಿ ಲಭ್ಯವಿರುವ ಸೀತಾಫಲವನ್ನ ತಿನ್ನಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಆದರೆ ಮಧುಮೇಹ ಹೊಂದಿರುವ ಜನರು ಸೀತಾಫಲವನ್ನ ಅಪ್ಪಿತಪ್ಪಿಯೂ ತಿನ್ನಬಾರದು. ಏಕೆ ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ…

ಮಧುಮೇಹ ಇರುವವರು ಸೀತಾಫಲವನ್ನ ತಿನ್ನಬಹುದೇ? ಈ ಬಗ್ಗೆ ವೈದ್ಯಕೀಯ ತಜ್ಞರು ಏನು ಹೇಳುತ್ತಾರೆ? ಪ್ರಸ್ತುತ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಈ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ಹೆಚ್ಚಿನ ಜನರು ಭಾರತದಲ್ಲಿದ್ದಾರೆಂದು ಹಲವಾರು ಅಧ್ಯಯನಗಳು ತೋರಿಸಿವೆ. ಅದಕ್ಕಾಗಿಯೇ ಭಾರತವನ್ನ ಮಧುಮೇಹದ ರಾಜಧಾನಿ ಎಂತಲೂ ಕರೆಯಲಾಗುತ್ತದೆ.

ಇಂದು ಮಧುಮೇಹವು ದೊಡ್ಡವರಿರಲಿ ಅಥವಾ ಚಿಕ್ಕವರಿರಲಿ ಎಲ್ಲಾ ವಯಸ್ಸಿನ ಜನರಿಗೆ ದೊಡ್ಡ ಸಮಸ್ಯೆಯಾಗಿದೆ. ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯೇ ಮಧುಮೇಹಕ್ಕೆ ಪ್ರಮುಖ ಕಾರಣವೆಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಸೀತಾಫಲದಲ್ಲಿ ಆಂಟಿ-ಆಕ್ಸಿಡೆಂಟ್‌ಗಳು, ಕ್ಯಾರಟೆನಾಯ್ಡ್‌ಗಳು, ಫ್ಲೇವನಾಯ್ಡ್‌ಗಳು, ವಿಟಮಿನ್ C, B6, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಫೈಬರ್ ಸಮೃದ್ಧವಾಗಿದೆ. ಮಧುಮೇಹದಿಂದ ಬಳಲುತ್ತಿರುವವರು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಹಣ್ಣುಗಳನ್ನ ಸೇವಿಸುತ್ತಾರೆ. ಗ್ಲೈಸೆಮಿಕ್ ಇಂಡೆಕ್ಸ್ ಇರುವ ಹಣ್ಣುಗಳಲ್ಲಿ ಈ ಸೀತಾಫಲವೂ ಒಂದು. ಈ ಹಣ್ಣಿನಲ್ಲಿ ಫ್ರಕ್ಟೋಸ್ ಇರುವುದರಿಂದ ಮಧುಮೇಹಿಗಳಿಗೆ ಇದು ಒಳ್ಳೆಯದಲ್ಲವೆಂದು ಹೇಳಲಾಗಿದೆ.

ಇನ್ಸುಲಿನ್ ಬಳಸದ ಮಧುಮೇಹ ರೋಗಿಗಳು ಸೀತಾಫಲವನ್ನ ಮಿತವಾಗಿ ತೆಗೆದುಕೊಳ್ಳಬಹುದು. ಇದನ್ನ 15 ದಿನಕ್ಕೊಮ್ಮೆ ತಿನ್ನುವುದರಿಂದ ಅವರ ಸಕ್ಕರೆಯ ಮಟ್ಟದಲ್ಲಿ ಯಾವುದೇ ಬದಲಾವಣೆಯಾಗಲ್ಲ. ಆದರೆ ಇನ್ಸುಲಿನ್ ತೆಗೆದುಕೊಳ್ಳುವ ಮಧುಮೇಹ ರೋಗಿಗಳು ಈ ಹಣ್ಣನ್ನ ತಿನ್ನುವ ಮೂಲಕ ತಮ್ಮ ಸಕ್ಕರೆ ಮಟ್ಟವನ್ನ ಹೆಚ್ಚಿಸಬಹುದು. ಈ ಸಿಹಿ ಹಣ್ಣನ್ನ ಸೇವಿಸುವುದರಿಂದ ಅವರ ಸಕ್ಕರೆ ಪ್ರಮಾಣ ಹೆಚ್ಚಾದರೆ ಇನ್ಸುಲಿನ್ ಪ್ರಮಾಣವನ್ನ ಮತ್ತೊಮ್ಮೆ ಹೆಚ್ಚಿಸಬೇಕಾಗುತ್ತದೆ. ಅದಕ್ಕಾಗಿಯೇ ಮಧುಮೇಹದಿಂದ ಬಳಲುತ್ತಿರುವವರು ಈ ಹಣ್ಣನ್ನ ತಿನ್ನಬಾರದು ಎಂದು ಸಲಹೆ ನೀಡಲಾಗಿದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು.  KANNADA E NEWS ಇದನ್ನು ದೃಢಪಡಿಸುವುದಿಲ್ಲ.)

About The Author

By Admin

Leave a Reply

Your email address will not be published. Required fields are marked *

error: ನಕಲು ಮಾಡಲು ಸಾಧ್ಯವಿಲ್ಲ!