ಗುಬ್ಬಿ ತಾಲೂಕಿನಲ್ಲಿ ಸುರಿದ ಭರ್ಜರಿ ಮಳೆಯಿಂದಾಗಿ ಹಲವು ಕೆರೆಗಳು ಕೋಡಿ ಬಿದ್ದಿವೆ. ಹೇಮಾವತಿ ನೀರಿನಿಂದ ತುಂಬಿದ್ದ ಕೆರೆಗಳು ಇದೀಗ ಹೆಚ್ಚಿನ ಒಳಹರಿವಿನಿಂದಾಗಿ ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ತಾಲೂಕಿನ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರಕುವ ನಿರೀಕ್ಷೆಯಿದೆ. ಚೇಳೂರು ಕೆರೆ ಕೂಡ ಭರ್ತಿಯಾಗಿದ್ದು, ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.