ಬೆಂಗಳೂರು: ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಗೆ (Priyank Kharge) ಬಿಜೆಪಿ ಹಿರಿಯ ನಾಯಕ ದಿವಂಗತ ಅನಂತ್ ಕುಮಾರ್ (Ananth Kumar) ಪುತ್ರಿ ಐಶ್ವರ್ಯ ಟಾಂಗ್ ನೀಡಿದ್ದಾರೆ.

ಬಿಹಾರ ಚುನಾವಣೆಗೆ ರಾಜ್ಯ ಕಾಂಗ್ರೆಸ್‌ನಿಂದ (Congress) ಹಣ ಹೋಗುತ್ತಿದೆ ಎಂಬ ಬಿಜೆಪಿಯ ಆರೋಪಕ್ಕೆ ಈ ಹಿಂದೆ ಯಡಿಯೂರಪ್ಪ- ಅನಂತ್ ಕುಮಾರ್ ಮಧ್ಯೆ ನಡೆದ ಸಂಭಾಷಣೆಯ ವಿಡಿಯೋ ಕ್ಲಿಪ್ ಟ್ವೀಟ್ ಮಾಡಿ ಪ್ರಿಯಾಕ್‌ ಖರ್ಗೆ ತಿರುಗೇಟು ನೀಡಿದ್ದರು.

ಬಿಜೆಪಿ ಹೈಕಮಾಡ್‌ಗೆ 1,800 ಕೋಟಿ ರೂ. ಕಪ್ಪ ನೀಡಿದ್ದನ್ನು ಬಿಎಸ್‌ವೈ-ಅನಂತ್ ಕುಮಾರ್ ಮಾತಾಡಿಕೊಂಡಿದ್ದು ಯಾರೂ ಮರೆತಿಲ್ಲ ಎಂದು ಎಕ್ಸ್‌ನಲ್ಲಿ ಪ್ರಿಯಾಂಕ್ ಖರ್ಗೆ ಪೋಸ್ಟ್‌ ಮಾಡಿದ್ದರು.

ಪ್ರಿಯಾಂಕ್‌ ಆರೋಪಕ್ಕೆ ಅನಂತ್ ಕುಮಾರ್ ಪುತ್ರಿ ಐಶ್ವರ್ಯಾ, ಇಬ್ಬರು ನಾಯಕರು ನಿಮ್ಮ ಪಕ್ಷದ ಡೈರಿಯಿಂದ ಬಂದ ಕಿಕ್ ಬ್ಯಾಕ್ ಲೆಕ್ಕಾಚಾರದ ವಿಚಾರದ ಬಗ್ಗೆ ಸಂಭಾಷಣೆ ಮಾಡಿದ್ದಾರೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಐಶ್ವರ್ಯ ಪೋಸ್ಟ್‌ನಲ್ಲಿ ಏನಿದೆ?


ಇದು ನಿಮ್ಮ ಪಕ್ಷದ ನಾಯಕರ ಬುಡಕ್ಕೇ ಬರಬಹುದು . ಅಂದು ಯಡಿಯೂರಪ್ಪ – ಅನಂತ್ ಕುಮಾರ್ ಅವರರು 2017ರಲ್ಲಿ ಬೆಳಕಿಗೆ ಬಂದಿದ್ದ ಗೋವಿಂದರಾಜು ಅವರ ಡೈರಿಯಲ್ಲಿ ದಾಖಲಾಗಿದ್ದ ಕಿಕ್ ಬ್ಯಾಕ್ ಲೆಕ್ಕಾಚಾರದ ವಿಚಾರದ ಬಗ್ಗೆ ಮಾತನಾಡಿದ್ದರು.

ಅದು ನಿಮ್ಮ ಪಕ್ಷದ್ದೇ ವಿಚಾರ , ಅಂದಿನ ನಿಮ್ಮ ಪಕ್ಷದ ಸಿಎಂ ಕಾಂಗ್ರೆಸ್ ಹೈಕಮಾಂಡ್ ಗೆ ಕೊಟ್ಟಿದ್ದ ಪಪ್ಪದ ಬಗ್ಗೆ ಇರುವ ಸಂಭಾಷಣೆ ಅದು. ಆರ್‌ಎಸ್‌ಎಸ್‌ಗೆ ಕಳಂಕ ಹಚ್ಚುವ ನಿಮ್ಮ ಪ್ರಯತ್ನ ವಿಫಲವಾಗಿದೆ. ಅದಕ್ಕಾಗಿ ಅನಂತ್ ಕುಮಾರ್ ಹಿಂದೆ ಬಿದ್ದಿದ್ದೀರಿ. ಅನಂತ್ ಕುಮಾರ್ ಬಗ್ಗೆ ನಿಮ್ಮ ಪಕ್ಷದವರೇ ಸಾಕಷ್ಟು ಮಂದಿ ಗೌರವ ಇಟ್ಕೊಂಡಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

About The Author

By Admin

Leave a Reply

Your email address will not be published. Required fields are marked *

error: ನಕಲು ಮಾಡಲು ಸಾಧ್ಯವಿಲ್ಲ!