ಮೇಷ: ದಿನೇ ದಿನೇ ಅಭಿವೃದ್ಧಿಯ ಸೂಚನೆಗಾಗಿ ಕಾಯುವ ನಿಮಗೆ ಸ್ವಲ್ಪ ಸಮಾಧಾನ ಕಂಡುಬರುವುದು. ನಿರುದ್ಯೋಗಿಗಳಿಗೆ ಉದ್ಯೋಗದ ಲಾಭವು ದೊರಕುವುದು. ಕೌಟುಂಬಿಕವಾಗಿ ಸಮಾಧಾನಕರ ವಾತಾವರಣವಿದೆ.
ವೃಷಭ: ಸಾಂಸಾರಿಕವಾಗಿ ಸಮಾಧಾನಕರ ವಾತಾವರಣದಿಂದ ತುಸು ಮಾನಸಿಕ ಶಾಂತಿ ದೊರಕಲಿದೆ. ಕಾರ್ಯರಂಗದಲ್ಲಿ ಮುನ್ನಡೆಯಲು ಉತ್ತಮ ಅವಕಾಶಗಳು ದೊರಕಲಿವೆ. ಉದ್ಯೋಗರಂಗದಲ್ಲಿ ಸ್ಪರ್ಧೆಯು ಕಂಡುಬರಲಿದೆ.
ಮಿಥುನ: ಹೊಸದಾದ ಕೆಲಸದ ಆರಂಭಕ್ಕೆ ಯಾ ಬಂಡವಾಳ ಹೂಡುವಿಕೆಗೆ ಈಗ ಉತ್ತಮ ಸಮಯವಾಗಿರುವುದಿಲ್ಲ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಖರ್ಚುವೆಚ್ಚಗಳು ಅಧಿಕವೆನಿಸಲಿದೆ. ಹಿರಿಯರ ಸಲಹೆಗಳನ್ನು ಕೇಳಿರಿ.
ಕರ್ಕ: ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ಮಾಡಬೇಕಾಗುತ್ತದೆ. ಪಿತ್ರಾರ್ಜಿತ ಆಸ್ತಿ ವ್ಯವಹಾರದಲ್ಲಿ ಮೋಸಹೋಗುವ ಸಂದರ್ಭ ಇರುವುದರಿಂದ ಜಾಗ್ರತೆ ಮಾಡಿರಿ. ಹಿತಶತ್ರುಗಳ ಕಾಟವು, ದಾಯಾದಿಗಳ ಕಾಟವೂ ಕಂಡು ಬೇಸರವಾಗಲಿದೆ.
ಸಿಂಹ: ಉದ್ಯೋಗ, ವ್ಯವಹಾರದಲ್ಲಿ ಅನಿರೀಕ್ಷಿತ ರೂಪದಲ್ಲಿ ಸಶಕ್ತವಾದ ಸ್ಥಾನಮಾನದ ನಿರೀಕ್ಷೆ ಇರುತ್ತದೆ. ಯುವಕ-ಯುವತಿಯರ ಪ್ರೇಮಪ್ರಕರಣದಲ್ಲಿ ಹೆತ್ತವರು ವಿರೋಧಿಸಿಯಾರು. ಕೃಷಿ, ಬೇಸಾಯದವರಿಗೆ ಲಾಭವಿರುತ್ತದೆ.
ಕನ್ಯಾ: ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕಂಡುಬರುವುದಕ್ಕೆ ಪ್ರಯತ್ನಬಲವಿರಲಿ. ಕಲಾಪ್ರೇಮಿ, ನಾಟಕ, ಸಂಗೀತದವರಿಗೆ ಮಾನ – ಸಮ್ಮಾನಗಳು ದೊರಕಲಿವೆ. ದೈಹಿಕವಾಗಿ ಉದರ ಸಂಬಂಧಿ ಕಾಯಿಲೆ ಕಾಡಬಹುದು.
ತುಲಾ: ಮಕ್ಕಳ ವಿಚಾರದಲ್ಲಿ ನೆಮ್ಮದಿ ಇರಲಾರದು. ಹೆತ್ತವರ ಜೊತೆಗೆ ಭಿನ್ನಾಭಿಪ್ರಾಯವು ಕಂಡುಬಂದೀತು. ಯಾವುದೇ ವಿಚಾರದಲ್ಲಿ ನಿಮ್ಮ ಸಮಸ್ಯೆಗಳನ್ನು ನೀವೇ ಬಗೆಹರಿಸುವುದು ಉತ್ತಮ. ಕಿರು ಸಂಚಾರವಿದೆ.
ವೃಶ್ಚಿಕ: ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂತಸವನ್ನು ಅನುಭವಿಸಲಿದ್ದೀರಿ. ಹಿರಿಯರೊಂದಿಗೆ ದೂರ ಸ್ಥಳಗಳನ್ನು ಸಂದರ್ಶಿಸುವ ಅವಕಾಶ ಕಂಡುಬರಲಿದೆ. ಸ್ಥಿರಾಸ್ತಿ ವ್ಯವಹಾರದಲ್ಲಿ ಲಾಭವನ್ನು ಹೊಂದುವಿರಿ.
ಧನು: ವಿದ್ಯಾರ್ಥಿಗಳು ದುರ್ವ್ಯಸನ ಹಾಗೂ ದುರಾಚಾರಿಗಳಿಂದ ದೂರವಿದ್ದಷ್ಟು ಉತ್ತಮ. ಹೊಸ ಮನೆ, ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಾದೀತು. ದೂರ ಸಂಚಾರದಲ್ಲಿ ಜಾಗ್ರತೆಯ ಅವಶ್ಯಕತೆ ಇದೆ.
ಮಕರ: ಸಂಬಂಧಿಕರಿಂದ ಸಹಕಾರ ಸಿಗಲಿದೆ. ಅನಿರೀಕ್ಷಿತ ಲಾಭ ಕಂಡುಬರುವುದು. ಆಧ್ಯಾತ್ಮಿಕ ಬೆಳವಣಿಗೆ ಕಂಡುಬಂದೀತು. ಸಾಂಸಾರಿಕವಾಗಿ ಕೂಡಾ ಉತ್ತಮ ಕೆಲಸಗಳಾಗಲಿವೆ. ಬಾಕಿಯಾದ ಕೆಲಸ ನಡೆಯಲಿದೆ.
ಕುಂಭ: ವಿಪರೀತ ಸ್ವಾಭಿಮಾನದಿಂದ ಅನಾವಶ್ಯಕ ತೊಂದರೆಗಳನ್ನು ಅನುಭವಿಸುವಿರಿ. ಅತೀ ಬುದ್ಧಿವಂತಿಕೆಯಿಂದ ಒಮ್ಮೊಮ್ಮೆ ಆರ್ಥಿಕ ಏರುಪೇರುಗಳು ಎದುರಾಗಬಹುದು. ಅನೇಕ ದುಂದುವೆಚ್ಚಗಳು ಎದುರಾದಾವು.
ಮೀನ: ಮಾನಸಿಕ ಚಂಚಲತೆಯು ಕಾಡಲಿದೆ. ಅಧಿಕ ಕಷ್ಟಗಳನ್ನು ಮನಸ್ಸಿನಲ್ಲೇ ನುಂಗುವಿರಿ. ವಿಶಾಲ ಮನೋಭಾವ ಹಾಗೂ ಉದಾರ ಹೃದಯವು ಅತೀ ಒಳ್ಳೆಯದಲ್ಲ . ದುರುಪಯೋಗವಾಗುವುದೇ ಹೆಚ್ಚಾದೀತು
